ಕ್ರೀಡೆ

ಆಸ್ಟ್ರೇಲಿಯಾ ಓಪನ್: ಸತತ 3ನೇ ಬಾರಿಗೆ ಸೂಪರ್ ಸರಣಿ ಫೈನಲ್ ತಲುಪಿದ ಶ್ರೀಕಾಂತ್

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯಾ ಓಪನ್ ಸೂಪರ್ ಸಿರೀಸ್ ನ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ...

ಆಸ್ಟ್ರೇಲಿಯಾ ಓಪನ್: ಸತತ 3ನೇ ಬಾರಿಗೆ ಸೂಪರ್ ಸರಣಿ ಫೈನಲ್ ತಲುಪಿದ ಶ್ರೀಕಾಂತ್
ಕಿದಂಬಿ ಶ್ರೀಕಾಂತ್
Published On :
ಸಿಡ್ನಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯಾ ಓಪನ್ ಸೂಪರ್ ಸಿರೀಸ್ ನ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 
ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಶಿ ಯುಕಿ ವಿರುದ್ಧ 21-10, 21-14 ನೇರ ಸೆಟ್ ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಶ್ರೀಕಾಂತ್ 37 ನಿಮಿಷದ ಆಟದಲ್ಲಿ ವಿರೋಚಿತ ಗೆಲುವು ಸಾಧಿಸಿದ್ದಾರೆ.
ಇದಕ್ಕೂ ಮುನ್ನ ಕಾರ್ಟರ್ ಫೈನಲ್ ನಲ್ಲಿ ಭಾರತದ ಆಟಗಾರನಾದ ಬಿ ಸಾಯಿ ಪ್ರಣೀತ್ ವಿರುದ್ಧ ಶ್ರೀಕಾಂತ್ 25-13, 21-17 ನೇರ ಸೆಟ್ ಗಳಿಂದ ಮಣಿಸಿ ಸೆಮಿಸ್ ಗೆ ಲಗ್ಗೆಯಿಟ್ಟಿದ್ದರು. 
ಆಸ್ಟ್ರೇಲಿಯಾ ಓಪನ್ ನಲ್ಲಿ ಭಾರತೀಯರ ಆಟ ಅಂತ್ಯಗೊಂಡಿದೆ. ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಬಿ ಸಾಯಿ ಪ್ರಣೀತ್ ಟೂರ್ನಿಯಿಂದ ಹೊರಬಂದಿದ್ದು ಇಂಡೊನೇಷ್ಯಾ ಓಪನ್ ಚಾಂಪಿಯನ್ ಆಗಿರುವ ಶ್ರೀಕಾಂತ್ ಮೇಲೆ ಭರವಸೆ ಹೆಚ್ಚಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.